LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಹೈದ್ರಾಬಾದ್

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್(Hydrebada): ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಸೋಮವಾರ ರಾತ್ರಿ ಮುಖಾಮುಖಿ ಆದರು. ಸತತ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದು ರಾಜಸ್ಥಾನ್ ರಾಯಲ್ಸ್ ಪಡೆಯನ್ನು ಹೈದ್ರಾಬಾದ್ ಟೀಂ ಮಣಿಸಿದೆ. ಈ ಮೂಲಕ ಆರ್ ಆರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲಾಗಿದೆ.

ಟಾಸ್ ಗೆದ್ದ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಪ್ಲಾನ್ ಉಲ್ಟಾ ಆಯಿತು. ಎಸ್ಆರ್ ಎಚ್ ಟೀಂ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು. ನಾಯಕ ಇಶಾನ್ ಕಿಶಾನ್ 6 ಸಿಕ್ಸ್, 8 ಫೋರ್ ಗಳೊಂದಿಗೆ 44 ಬೌಲ್ ಗಳಲ್ಲಿ ಭರ್ಜರಿ 91 ರನ್ ಗಳಿಸಿದರು. ಹೆನ್ರಿಚ್ 40, ನಿತೀಶ್ ಕುಮಾರ್ ರೆಡ್ಡಿ 28, ಸಲಿಲ್ ಅರೋರ್ 24 ರನ್ ಗಳಿಂದಾಗಿ 200ರ ಗಡಿ ದಾಟಿತು. ಆರ್ ಆರ್ ಪರ ಜೋಪರ್ ಆರ್ಚರ್ 2, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು.

217 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಆರ್ ಟೀಂಗೆ ಪ್ರಫುಲ್ ಹಿಂಗೆ ಹಾಗೂ ಶಕೀಬ್ ಹಸನ್ ಆಘಾತ ನೀಡಿದರು. 2.6 ಓವರ್ ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಿತ್ತಿದರು. ಜೈಸ್ವಾಲ್ 0, ಆರಂಭದಿಂದಲೂ ಅಬ್ಬರಿಸುತ್ತಿರುವ ಯುವ ಆಟಗಾರ ವೈಭವ ಸೂರ್ಯವಂಶಿ 1, ಜುರ್ಲೆ 0, ಪ್ರಿಟೋರಿಯಸ್ 0, ನಾಯಕ ಪರಾಗ್ 4 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ಆಲ್ ರೌಂಡರ್ ಜಡೇಜಾ 45, ಫೆರೇರಾ 69 ರನ್ ಗಳಿಸಿ 7 ವಿಕೆಟ್ ಜೊತೆಯಾಟದಲ್ಲಿ 118 ರನ್ ಗಳಿಸಿ ಗೆಲುವಿನ ಆಸೆ ಜೀವಂತವಾಗಿಟ್ಟಿದ್ದರು. ಶಕೀಬ್ ಹಸನ್ ಫೆರೇರಾ ವಿಕೆಟ್ ಪಡೆದು ಇವರ ಆಟಕ್ಕೆ ಬ್ರೇಕ್ ಹಾಕಿದರು.

ಜೋಫ್ರಾ ಆರ್ಚರ್ 2, ದೇಶಪಾಂಡೆ 25, ರವಿ ಬಿಷ್ಣೋಯಿ 0 ಗೆ ಔಟ್ ಆದರು. ನಂದ್ರೆ ಬರ್ಗರ್  ಅಜೇಯ 3 ರನ್ ಗಳಿಸಿದರು. ಆರ್ ಆರ್ ತಂಡದಲ್ಲಿ 4 ಆಟಗಾರರನ್ನು ಡಕೌಟ್ ಮಾಡಲಾಯಿತು. ಪ್ರಫುಲ್ ಹಿಂಗೆ 4, ಶಕೀಬ್ ಹಸನ್ 4 ವಿಕೆಟ್ ಪಡೆದು ಆರ್ ಆರ್ ಪಡೆಗೆ ಮರ್ಮಾಘಾತ ನೀಡಿದರು. ಇಶಾನ್ ಮಲಿಂಗಾ 2 ವಿಕೆಟ್ ಪಡೆದರು. ಪ್ರಫುಲ್ ಹಿಂಗೆ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST