ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶುಕ್ರವಾರ ಸಂಜೆ ನಡೆದ ಐಪಿಎಲ್ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದ್ರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಪ್ಲಾನ್ ಅನ್ನು ಬ್ಯಾಟರ್ ಗಳು ಸಾಬೀತು ಪಡಿಸಿದರು. ಹೀಗಾಗಿ ಇಲ್ಲಿ ಸಿಕ್ಸ್, ಫೋರ್ ಗಳ ಮೂಲಕ ರನ್ ಸುರಿಮಳೆ ಸುರಿಸಿದರು.
46 ಬೌಲರ್ ಗಳಲ್ಲಿ ಶ್ರೇಯಸ್ ಅಯ್ಯರ್ 79 ರನ್(3 ಸಿಕ್ಸ್, 8 ಫೋರ್), 22 ಬೌಲ್ ಗಳಲ್ಲಿ ಅಭಿಷೇಕ್ ಶರ್ಮಾ 56 ರನ್(5 ಸಿಕ್ಸ್, 4 ಫೋರ್), 24 ಬೌಲ್ ಗಳಲ್ಲಿ ಕಾಲ್ಸನ್ 51 ರನ್(5 ಸಿಕ್ಸ್, 2 ಫೋರ್), ನಿತೀಶ್ ಕುಮಾರ್ ರೆಡ್ಡಿ 12 ಬೌಲ್ ಗಳಲ್ಲಿ ಅಜೇಯ 29 ರನ್(3 ಸಿಕ್ಸ್, 1 ಫೋರ್) ಹಾಗೂ ಟ್ರಾವಿಸ್ ಹೆಡ್ 26 ರನ್ ಗಳಿಂದಾಗಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 255 ರನ್ ಗಳಿಸಿತು. ಆರ್ ಸಿಬಿ ಬೌಲರ್ ಗಳ ಆಟ ಈ ಬಾರಿ ನಡೆಯಲಿಲ್ಲ. ರಷಿಕ್ ಸಲ್ಮಾ 2, ಸುಯೇಷ್ ಶರ್ಕಾ, ಕುನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಬಿಗ್ ರನ್ ಚೇಸ್ ಮಾಡಿದ ಆರ್ ಸಿಬಿ ಆರಂಭದಲ್ಲಿ ಅಬ್ಬರಿಸಿತು. ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಜೋಡಿ 4.2 ಓವರ್ ಗಳಲ್ಲಿ 60 ರನ್ ಗಳಿಸಿತು. 4 ಸಿಕ್ಸ್, 4 ಫೋರ್ ಗಳೊಂದಿಗೆ ಅಬ್ಬರಿಸುತ್ತಿದ್ದ ವೆಂಕಟೇಶ್(44 ರನ್) ವಿಕೆಟ್ ಪಡೆದ ಮಲಿಂಗಾ ಈ ಜೋಡಿ ಆಟಕ್ಕೆ ಬ್ರೇಕ್ ಹಾಕಿದರು. ಸ್ವಲ್ಪ ಹೊತ್ತಿನ ಬಳಿಕ ವಿರಾಟ್ ಕೊಹ್ಲಿ ಸಕಿಬ್ ಹುಸೈನ್ ಗೆ ವಿಕೆಟ್ ನೀಡಿದರು. ನಾಯಕ ಪಟೀದಾರ್ 56, ಕುನಾಲ್ ಪಾಂಡ್ಯ ಅಜೇಯ 41 ರನ್ ಗಳಿಸಿದರು. ಟಿಮ್ ಡೇವಿಡ್ ಅಜೇಯ 15 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಎಸ್ಆರ್ ಎಚ್ 55 ರನ್ ಗಳಿಂದ ಗೆಲುವು ಸಾಧಿಸಿತು.
ಹೈದ್ರಾಬಾದ್ ಪರ ಮಲಿಂಗಾ 2, ಹೆಡ್, ಹುಸೈನ್ ತಲಾ 1 ವಿಕೆಟ್ ಪಡೆದರು. ಶ್ರೇಯಸ್ ಅಯ್ಯರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಈ ಪಂದ್ಯ ಸೋತರೂ ರನ್ ರೇಟ್ ಆಧಾರದ ಮೇಲೆ ಆರ್ ಸಿಬಿ ಅಂಕ ಪಟ್ಟಿಯಲ್ಲಿ ಅ್ರಗ ಸ್ಥಾನದಲ್ಲಿಯೇ ಮುಂದುವರೆಯಿತು.



