LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಬ್ಬೇವಾಡದಲ್ಲಿ ಕಡಕೋಳ ಮಡಿವಾಳೇಶ್ವರ ಮಹಾಪುರಾಣ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲ್ಲೂಕಿನ ಗುಬ್ಬೇವಾಡ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಆಗಸ್ಟ್ 5, 2024 ಸೋಮವಾರದಿಂದ ಸುಮಾರು ಒಂದು ತಿಂಗಳ ಕಾಲ ಸಂಜೆ 7ಗಂಟೆಯಿಂದ ಮಹಾಪುರಾಣ ನಡೆಯಲಿದೆ. ಕಡಕೋಳ ಶ್ರೀ ಮಡಿವಾಳೇಶ್ವರ(Kadakola Madivalappa) ಮಹಾಪುರಣ ನಡೆಯಲಿದೆ. ಗ್ರಾಮದ ಅಡಿವೇಶ್ವರ ಹಿರೇಮಠದ ಅಡಿವೇಶ್ವರ ಮಹಾಸ್ವಾಮಿಗಳ ಸಾನಿಧ್ಯ ಇರಲಿದೆ. ಬಸವೇಶ್ವರ ದೇವಸ್ಥಾನದ ಮಲ್ಲಯ್ಯ ಕಾಸಯ್ಯ ಹಿರೇಮಠ ಇವರು ನೇತೃತ್ವ ವಹಿಸಿಕೊಂಡಿದ್ದಾರೆ.

ಗದಗದ ಶ್ರೀ ಪುಟ್ಟರಾಜ ಗವಾಯಿಗಳ(Puttaraj Gawai) ಶಿಷ್ಯರಾದ ಶ್ರೀಕುಮಾರ ಪ್ರಶಸ್ತಿ ವಿಜೇತರಾದ ಶಿವಾನಂದ ಶಾಸ್ತ್ರಿಗಳು-ಪುರಾಣಿಕರು, ಸಂಗೀತ-ಕಲ್ಲಯ್ಯಸ್ವಾಮಿ ಪಡದಳ್ಳಿ, ತಬಲಾ ವಾದಕರು-ಪ್ರವೀಣಕುಮಾರ ಕಣವಿ ನಡೆಸಿಕೊಡಲಿದ್ದಾರೆ. ಮಹಾಪುರಣಾದಲ್ಲಿ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಸೇರಿ ಅನೇಕರು ಭಾಗವಹಿಸಲಿದ್ದಾರೆ. ಸದ್ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳಬೇಕೆಂದು ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST