LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಣೆಯಿಂದ ಟೆಂಗಿನಕಾಯಿ, ನಿಂಬೆಹಣ್ಣು ಒಡೆಯುವ ಲಕ್ಷ್ಮಣ

ಪ್ರಜಾಸ್ತ್ರ ವಿಶೇಷ ಸುದ್ದಿ

ಸಿಂದಗಿ(Sindagi): ನಮ್ಮ ದೇಸಿಯ ಸಾಹಸ ಕಲೆಗಳು ಸಾಕಷ್ಟಿವೆ. ಅವುಗಳನ್ನು ನೋಡುತ್ತಿದ್ದರೆ ಮೈ ಜುಮ್ ಎನ್ನುತ್ತೆ. ಇದರ ಜೊತೆಗೆ ಕೆಲವರು ತಮ್ಮ ವಿಶಿಷ್ಟ ಸಾಹಸದ ಮೂಲಕ ಎಲ್ಲರ ನಡುವೆ ವಿಭಿನ್ನವಾಗಿ ಕಾಣುವ ಜೊತೆಗೆ ಏನಾದರೂ ಸಾಧಿಸಬೇಕು ಎನ್ನುವ ಛಲ ಹೊಂದಿರುತ್ತಾರೆ. ಅಂತವರಲ್ಲಿ ಸಿಂದಗಿ ತಾಲೂಕಿನ ಮದರಿ ಗ್ರಾಮದ ಲಕ್ಷ್ಮಣ ಮಾದರ ಎನ್ನುವ ಯುವಕ. ಈತ ಹಣೆಯಿಂದ ತೆಂಗಿನಕಾಯಿ, ನಿಂಗೆಹಣ್ಣನ್ನು ಒಡೆಯುತ್ತಾನೆ. ಬಣ್ಣದ ನೀರು ತುಂಬಿದ ದೊಡ್ಡ ಪಾತ್ರೆಯಲ್ಲಿನ ಚೂಜಿಯನ್ನು ಕಣ್ಣಿಯಿಂದ ಹೊರ ತೆಗೆಯುತ್ತಾನೆ.

ಯುವಕ ಲಕ್ಷ್ಮಣ ಮಾದರ ಕಳೆದ ಸುಮಾರು ಮೂರು ವರ್ಷಗಳಿಂದ ಇಂತಹದೊಂದು ಸಹಾಸ ಮಾಡಿಕೊಂಡು ಬರುತ್ತಿದ್ದಾನೆ. ಒಂದು ದಿನ ಒಬ್ಬರು ಟೆಂಗಿನಕಾಯಿಯನ್ನು ಕಾಯಿಂದ ಒಡೆಯುವುದನ್ನು ನೋಡಿದ. ಆಗ ಅವರಲ್ಲಿ ಏನೂ ಹೊಳೆಯಿತೋ ಗೊತ್ತಿಲ್ಲ. ನಾನು ಹಣೆಯಿಂದ ತೆಂಗಿನಕಾಯಿ ಒಡೆಯುತ್ತೇನೆ ಎಂದು ಮುಂದೆ ಬಂದು ಒಡೆದರು. ಅಂದಿನಿಂದ ಇಲ್ಲಿಯ ತನಕ ಸಿಂದಗಿ, ಕಮಲಾಪುರ, ಕಲಬುರಗಿ, ಬೆಂಗಳೂರು, ಉಡುಪಿ, ಗೋವಾ ಸೇರಿ ಮುಂತಾದ ಕಡೆ ತಮ್ಮ ಸಾಹಸ ಪ್ರದರ್ಶನ ನೀಡಿದ್ದಾರೆ. ಇದನ್ನು ಅನೇಕರು ಮೆಚ್ಚಿಕೊಂಡು ಗೌರವಿಸಿದ್ದಾರೆ.

‘ಊರಿನಲ್ಲಿ ಒಂದು ದಿನ ಟೆಂಗಿನಕಾಯಿಯನ್ನು ಕೈಯಿಂದ ಒಡೆಯುವುದನ್ನು ನೋಡಿದೆ. ನಾನು ಅವರಿಗಿಂತ ಹೆಚ್ಚಿನದ್ದು ಏನಾದರು ಮಾಡಬೇಕೆಂದು ಹಣೆಯಿಂದ ಟೆಂಗಿನಕಾಯಿ ಒಡೆಯಲು ಶುರು ಮಾಡಿದೆ. ನಮ್ಮ ಭಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನನ್ನ ಸಾಹಸ ಪ್ರದರ್ಶನ ನೀಡಿದ್ದೇನೆ. ಇನ್ನು ಹೆಚ್ಚಿನ ಸಾಧನೆ ಮಾಡಲು ನಿಮ್ಮ ಸಹಕಾರಬೇಕು’. – ಲಕ್ಷ್ಮಣ ಮಾದರ, ಸಾಹಸಿ


ಮದರಿ ಗ್ರಾಮದಲ್ಲಿ 6 ಜನರ ಇವರ ತಂಡವಿದೆ. ರೇಣುಕಾ ಯಲ್ಲಮ್ಮ ಹಲಗಿವಾದ ಎನ್ನುವ ತಂಡದ ಮೂಲಕ ಜಾತ್ರೆಗಳಲ್ಲಿ ಹಲಗಿಯನ್ನು ತುಂಬಾ ಅದ್ಬುತವಾಗಿ ಬಾರಿಸುವುದರೊಂದಿಗೆ ರಂಜಿಸುತ್ತಾರೆ. ಇದರ ಜೊತೆಗೆ ಲಕ್ಷ್ಮಣ ಮಾದರಿ ಟೆಂಗಿನಕಾಯಿ, ನಿಂಬೆಹಣ್ಣನ್ನು ಹಣೆಯಿಂದ ಒಡೆಯುವುದು, ಬಣ್ಣದ ನೀರಿನಲ್ಲಿರುವ ಚೂಜಿಯನ್ನು ಕಣ್ಣಿನಿಂದ ಹೊರ ತೆಗೆಯುವ ಸಾಹಸ ಪ್ರದರ್ಶನ ನೀಡುತ್ತಾರೆ. ಇಂತಹ ಸಾಹಸಿಗೆ ಒಂದಿಷ್ಟು ನೆರವು ಬೇಕಿದೆ. ಈ ಭಾಗದ ಜನಪ್ರತಿನಿಧಿಗಳು, ಸರ್ಕಾರದ ಇಲಾಖೆಗಳು, ಸಂಘ ಸಂಸ್ಥೆಗಳು ತನಗೆ ಒಂದಿಷ್ಟು ನೆರವು ನೀಡಿದರೆ ಹೆಚ್ಚಿನ ಸಾಧನೆ ಮಾಡುತ್ತೇನೆ ಎಂದು ಮನವಿ ಮಾಡಿದ್ದಾನೆ.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST