ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಪಂಚಾಯತ್ ಸಭಾಂಗಣ ಶಾಸಕ ಅಶೋಕ ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ತಾಲೂಕು ವ್ಯಾಪ್ತಿಯ ಯಾವುದೇ ಗ್ರಾಮ ಪಂಚಾಯತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಕ್ಷಣ ವರದಿ ನೀಡಲು ಪಿಡಿಒಗಳಿಗೆ ತಿಳಿಸಿದರು.
ನಾಗಾವಿ.ಬಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರವಗುಂಡಗಿ ಗ್ರಾಮದ ವರದಿ ನೀಡಬೇಕು. ರಾಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಂಪುರ.ಪಿಎ ಮತ್ತು ಗಣಿಹಾರ ಗ್ರಾಮಗಳ ವರದಿ ನೀಡಬೇಕು. ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಗಿ ಮತ್ತು ಪುರದಾಳ ಗ್ರಾಮಗಳಲ್ಲಿ 2 ಬೋರವೆಲ್ ಬೇಕು ಎಂದು ತಿಳಿಸಿದರು. ಚಾಂದಕವಟೆ ಪಂಚಾಯತ್ ವ್ಯಾಪ್ತಿಯ ಕೆರೆಯಲ್ಲಿ ಟಿಸಿ ಬದಲಿಸಬೇಕು. ಸುರಗಿಹಳ್ಳಿ ಗ್ರಾಮದಲ್ಲಿ ಪದೆಪದೆ ಟಿಸಿ ಸುಡುತ್ತಿದೆ ಎಂದು ಪಿಡಿಒ ಮಾಹಿತಿ ನೀಡಿದರು.
ಗೋಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಸಬಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಬೋರವೆಲ್ ಬೇಕು. ಬ್ಯಾಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡಬಾಳ, ಮನ್ನಾಪುರ, ಅಂತರಗಂಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುತ್ತದೆ ಎಂದು ಪಿಡಿಒ ತಿಳಿಸಿದರು. ಯಂಕಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಂಕಂಚಿ ಮತ್ತು ಖೈನೂರ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಬೋರವೆಲ್ ಬೇಕು. ಮರಗಮ್ಮ ಗುಡಿ ಹತ್ತಿರ, ಜಟ್ಟೆಪ್ಪ ನಗರಗಳಲ್ಲಿ ಬೋರವೆಲ್ ಬೇಕು. ಚಟ್ಟರಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಂಪುರ ಗ್ರಾಮಕ್ಕೆ ಒಂದು ಬೋರವೆಲ್ ಬೇಕು. ಕನ್ನೊಳ್ಳಿಗೆ ಒಂದು ಬೋರವೆಲ್ ಬೇಕು. ಹಂದಿಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂಡದಲ್ಲಿ 1 ಬೋರವೆಲ್ ಬೇಕು ಎಂದು ಪಿಡಿಒಗಳು ಶಾಸಕರಿಗೆ ಮಾಹಿತಿ ನೀಡಿದರು.
ಹಿಕ್ಕನಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವದಿಲ್ಲ. ಯರಗಾಲ್ ಬಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವದಿಲ್ಲ. ಕೊಕತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವದಿಲ್ಲ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಇಒ ರಾಮು.ಜಿ ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯರು ನೂರಹ್ಮದ ಅತ್ತಾರ, ಶಿವಾನಂದ ಕೊಟರಗಸ್ತಿ, ತಾಲೂಕು ಕೆಡಿಪಿ ಸದಸ್ಯರಾದ ಸುರೇಶ ಚೌದರಿ, ಅಯ್ಯಪ್ಪ ಕಟ್ಟಿಮನಿ, ಮಹಾದೇವಿ ಬಾಮ್ಮಣ್ಣಿ ಉಪಸ್ಥಿತರಿದ್ದರು. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.



