LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಎಲ್ಲ ಬ್ಯಾಂಕ್ ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಮನವಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಆರ್ ಬಿಐ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಕೃತ ಬ್ಯಾಂಕ್ ಗಳು, ಪಿಕೆಪಿಎಸ್, ಡಿಸಿಸಿ ಸೇರಿದಂತೆ ಫೈನಾನ್ಸ್ ನಡೆಸುವ ಬ್ಯಾಂಕ್ ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಬೇಕು ಎಂದು, ಭೀಮ ಸೇನೆ ಕರ್ನಾಟಕ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದ್ದು, ಅಂಬೇಡ್ಕರ್ ಜಯಂತಿ ಆಚರಿಸಿದ ಬ್ಯಾಂಕ್ ಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಎಲ್ಲ ಬ್ಯಾಂಕ್ ಗಳಿಗೆ, ಆರ್ಥಿಕ ಸಂಸ್ಥೆಗಳಿಗೆ ಆದೇಶ ಮಾಡುತ್ತೇನೆ ಅನ್ನೋ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭೀಮ ಸೇನೆ ಕರ್ನಾಟಕದ ತಾಲೂಕಾಧ್ಯಕ್ಷ ಪ್ರಜ್ವಲ ಮಲ್ಹಾರಿ, ಸಾಮಾಜಿಕ ಹೋರಾಟಗಾರ ಹರ್ಷವರ್ಧನ ಪೂಜಾರಿ, ದ್ಯಾವಪ್ಪ ಕುದರಗೊಂಡ, ಲಕ್ಷ್ಮಣ ಓಲೇಕಾರ ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST