LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಮಹಾಕಾಳಿ ವೇಷದಲ್ಲಿ ಮಕ್ಕಳ ಸಂಭ್ರಮ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನಾದ್ಯಂತ ನವರಾತ್ರಿಯನ್ನು ತುಂಬ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕಳೆದ 8 ದಿನಗಳಿಂದ ನಿತ್ಯ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಅದೇ ರೀತಿ ಪಟ್ಟಣದಲ್ಲಿರುವ ಕಾಳಿಕಾ ದೇವಸ್ಥಾನದಲ್ಲಿ ಎಲ್ಲ ಸಮುದಾಯದ ಮಕ್ಕಳು ದೇವಿ ಕಾಳಿಯ ಅವತಾರದಲ್ಲಿ ಕಾಣಿಸಿಕೊಂಡರು. ಕಾಳಿಯ ವೇಷ ಭೂಷಣದಲ್ಲಿ ಕಾಣಿಸಿಕೊಂಡ ಮಕ್ಕಳನ್ನು ನೋಡಿದ ಹೆತ್ತವರು ಸಂಭ್ರಮಿಸಿದರು.

ದೇವಸ್ಥಾನದಲ್ಲಿ ಮುಂಜಾನೆಯಿಂದ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಕಾಳಿಕಾನಗರದ ನಿವಾಸಿಗಳು ಇದರಲ್ಲಿ ಭಾಗವಹಿಸಿದ್ದರು. ನಾಯಕಿ ಮಹಿಳಾ ಮಂಡಳಿಯ ಸದಸ್ಯರು, ಸಮಾಜದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿ ತಮ್ಮ ಮಕ್ಕಳಲ್ಲಿ ದೇವಿಯ ಸ್ವರೂಪ ಕಂಡು ಖುಷಿ ಪಟ್ಟರು. ಮುದ್ದು ಮಕ್ಕಳು ಸಹ ಅಷ್ಟೇ ಲವಲವಿಕೆಯಿಂದ ಭಾಗವಹಿಸಿ ನೆರದಿದ್ದ ಭಕ್ತರ ಕಣ್ಮನ ತಣಿಸಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST