LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ನೇಣಿಗೆ ಶರಣಾದ ರೈತ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ದುಂಡಪ್ಪ ಸಿದ್ರಾಮಪ್ಪ ಮನಗೂಳಿ(35) ಮೃತ ರೈತನಾಗಿದ್ದಾನೆ. ಗ್ರಾಮದ ಜಮೀನಿನಲ್ಲಿರುವ ಬೇವಿನಗಿಡಕ್ಕೆ ಕೇಬಲ್ ವಯರ್ ನಿಂದ ಜನವರಿ 14ರ ರಾತ್ರಿ 8ಗಂಟೆಯಿಂದ ಜನವರ 17ರ ಮುಂಜಾನೆ 11 ಗಂಟೆಯ ನಡುವಿನ ಅವಧಿ ನೇಣು ಹಾಕಿಕೊಂಡಿದ್ದಾನೆ ಎಂದು ದೂರಿನಲ್ಲಿ ಮೃತನ ಸಹೋದರ ತಿಳಿಸಿದ್ದಾರೆ.

ಊರಿನಲ್ಲಿ ಮನೆಯ ಸಾಲು 3 ಲಕ್ಷ ರೂಪಾಯಿ, ಮಾಡಬಾಳದ ಪಿಕೆಪಿಎಸ್ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ. ಇದನ್ನು ತೀರಿಸಲು ಆಗದೆ ಮಾನಸಿಕವಾಗಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ಯಾವುದೇ ಸಂಶಯ ಇಲ್ಲವೆಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST