LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಫ್ರಿಕಾ ಆಲ್ ರೌಂಡರ್ ಆಟಕ್ಕೆ ಟೀಂ ಇಂಡಿಯಾ ಸೈಲೆಂಟ್

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್(Ahmedabad): ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಭಾರತ ಹಾಗೂ ಸೌಥ್ ಆಫ್ರಿಕಾ ತಂಡಗಳು ಭಾನುವಾರ ಸಂಜೆ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸೌಥ್ ಆಫ್ರಿಕಾ ನಾಯಕ ಆಡನ್ ಮಾರ್ಕಂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ತಂಡ, ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. 4 ಓವರ್ ಗಳಲ್ಲಿ 20 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ನಾಯಕ ಮಾರ್ಕಂ 4 ರನ್, ಡಿ ಕಾಕ್ 6 ರನ್, ರಿಕ್ಟೆನ್ 7 ರನ್ ಗಳಿಸಿ ಔಟ್ ಆದರು.

ಮುಂದೆ ಮಿಲ್ಲರ್ ಹಾಗೂ ಬ್ರೆವಿಸ್ ಜೋಡಿ ಅದ್ಭುತ್ 97 ರನ್ ಗಳ ಜೊತೆಯಾಟವಾಡಿತು. ಈ ವೇಳೆ ಮಿಲ್ಲರ್ 63 ರನ್, ಬ್ರೆವಿಸ್ 45 ರನ್ ಗಳಿಸಿದರು. ಸ್ಟಬ್ಸ್ 44 ರನ್ ಗಳಿಸಿದರು. ಹೀಗಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಭಾರತ ಪರ ಬೂಮ್ರಾ 3, ಅರ್ಷದೀಪ್ ಸಿಂಗ್ 2, ವರುಣ್ ಚಕ್ರವರ್ತಿ, ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಒಪ್ಪಿಸುತ್ತಾ ಹೋಯಿತು. ಇಶಾನ್ ಕಿಶನ್ 0, ಅಭಿಷೇಕ್ ಶರ್ಮಾ 15, ತಿಲಕ್ ವರ್ಮಾ 1, ನಾಯಕ ಸೂರ್ಯಕುಮಾರ್ ಯಾದವ್ 18, ವಾಷಿಂಗ್ಟನ್ ಸುಂದರ್ 11 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯೆ ಜೋಡಿ ಕಮಾಲ್ ಮಾಡಬಹುದು ಅನ್ನೋ ಭಾರತೀಯ ಕ್ರಿಕೆಟ್ ಪ್ರೇಮಿಗಳ ನಂಬಿಕೆ ಸಹ ಹುಸಿಯಾಯಿತು. ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ 42, ಪಾಂಡ್ಯೆ 18 ರನ್ ಗಳಿಸಿದರು.

ರಿಂಕು ಸಿಂಗ್ 0, ಅರ್ಷದೀಪ್ ಸಿಂಗ್ 1, ಬೂಮ್ರಾ 0 ರನ್ ಗೆ ಔಟ್ ಆದರು. ಅಂತಿಮವಾಗಿ ಭಾರತ 18.5 ಓವರ್ ಗಳಲ್ಲಿ 111 ರನ್ ಗಳಿಗೆ ಆಲೌಟ್ ಆಯಿತು. ಸೌಥ್ ಆಫ್ರಿಕಾ ಪರ ಮಾರ್ಕ್ ಜಾನ್ಸನ್ 4 ವಿಕೆಟ್ ಕಿತ್ತಿ ಕಮಾಲ್ ಮಾಡಿದರು. ಕೇಶವ್ ಮಹಾರಾಜ್ 3 ವಿಕೆಟ್ ಪಡೆದು ಮಿಂಚಿದರು. ಬೋಚ್ 2, ಮಾರ್ಕಂ 1 ವಿಕೆಟ್ ಪಡೆದರು. ಡೇವಿಡ್ ಮಿಲ್ಲರ್ ಪ್ಲೇಯರ್ ಆಪ್ ದಿ ಮ್ಯಾಚ್ ಆದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST