LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಜರಾತ್ ವಿರುದ್ಧ ಗೆದ್ದ ಮುಂಬೈ.. ಫೈನಲ್ ಗೆ ಯಾರು?

ಪ್ರಜಾಸ್ತ್ರ ಸುದ್ದಿ

ಮುಲ್ಲನ್ ಪುರ(Mullanpur): ಪಂಜಾಬಿನ ಮುಲ್ಲನರ್ ಪುರದಲ್ಲಿರುವ ಮಹಾರಾಜ ಯದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಐಪಿಎಲ್-2025 2ನೇ ಕ್ವಾಲಿಫೈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 20 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಗುಜರಾತ್ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಪಂಜಾಬ್ ವಿರುದ್ಧ ಮುಂಬೈ ಕಣಕ್ಕೆ ಇಳಿಯಲಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟರ್ ಗಳು ಉತ್ತಮವಾಗಿ ಆಡಿದರು. ರೋಹಿತ್ ಶರ್ಮಾ 50 ಬೌಲ್ ಗಳಲ್ಲಿ 81 ರನ್ ಬಾರಿಸಿದರು. ಬ್ರಿಸ್ಟೊ 47, ಸೂರ್ಯಕುಮಾರ್ ಯಾದವ್ 33, ತಿಲಕ್ ವರ್ಮಾ 25 ರನ್ ಗಳಿಸಿ ಔಟ್ ಆದರು. ನಾಯಕ ಪಾಂಡ್ಯ ಅಜೇಯ 22 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಜಿಟಿ ಪರ ಪ್ರಸಿದ್ಧ್ ಕೃಷ್ಣ, ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

ಬಿಗ್ ಸ್ಕೋರ್ ಬೆನ್ನು ಹತ್ತಿದ ಜಿಟಿ ಪಡೆ ಒಂದು ಹಂತದಲ್ಲಿ ಗೆಲುವಿನ ಹಂತದಲ್ಲಿತ್ತು. ಅದೃಷ್ಟ ಅವರ ಪಾಲಿಗೆ ಇರಲಿಲ್ಲ. ಯಾಕಂದರೆ ಇನ್ನು 4 ವಿಕೆಟ್ ಇದ್ದರೂ ಕೊನೆ ಗಳಿಗೆಯಲ್ಲಿ ಬಿರುಸಿನ ಆಟ ಬರಲಿಲ್ಲ. ಸಾಯಿ ಸುದರ್ಶನ್ ಭರ್ಜರಿ 80 ರನ್ ಗಳಿಸಿದರು. ವಾಸಿಂಗ್ಟನ್ ಸುಂದರ್ 48, ಕುಶಾಲ್ ಮೆಂಡಿಸ್ 20, ಸ್ರಿಫನ್ 24 ರನ್ ಗಳಿಸಿದರು. ನಾಯಕ ಶುಭನಂ ಗಿಲ್ 1 ರನ್ ಗಳಿಸಿ ವಿಫಲರಾದರು. ರಾಹುಲ್ ತೇವಾಟಿಯಾ 16, ಶಾರೂಖ್ ಖಾನ್ 13 ರನ್ ಗಳಿಸಿದರು. ಕೊನೆಗೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಸೋಲು ಅನುಭವಿಸಿತು. ಮುಂಬೈ ಪರ ಬೋಲ್ಟ್ 2 ವಿಕೆಟ್ ಪಡೆದರು. ಬೂಮ್ರಾ, ರೀಚಡ್ ಗ್ಲೀಸನ್, ಸ್ಯಾಂತ್ನರ್, ಅಶ್ವಿನಿಕುಮಾರ್ ತಲಾ 1 ವಿಕೆಟ್ ಪಡೆದರು. ಇನ್ನು ಪಂಜಾಬ್ ಹಾಗೂ ಮುಂಬೈ ನಡುವೆ ಯಾರು ಗೆಲ್ಲುತ್ತಾರೋ ಅವರು ಜೂನ್ 3ರಂದು ಫೈನಲ್ ನಲ್ಲಿ ಆರ್ ಸಿಬಿ ತಂಡವನ್ನು ಎದುರಿಸಲಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST