Ad imageAd image

RCB vs KKR: ಟಾಪ್ 1 ಆಗಲು ಬೆಂಗಳೂರು ಹುಡುಗರ ಪಣ

Nagesh Talawar
RCB vs KKR: ಟಾಪ್ 1 ಆಗಲು ಬೆಂಗಳೂರು ಹುಡುಗರ ಪಣ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಯಪುರ(Raipur): ಬುಧವಾರ ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ನಡೆಯುತ್ತಿದೆ. 2ನೇ ಸ್ಥಾನದಲ್ಲಿ ಆರ್ ಸಿಬಿ ಹುಡುಗರು ಟಾಪ್ 1ರಲ್ಲಿ ಕುಳಿತುಕೊಳ್ಳಲು ಪಣ ತೊಟ್ಟಿದ್ದಾರೆ. ಇನ್ನೊಂದು ಕಡೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ ಕೆಕೆಆರ್ ಗೆ ಗೆಲುವು ಅನಿವಾರ್ಯ. ಅಜಿಂಕ್ಯಾ ರಹಾನೆ ಪಡೆಗೆ ರಜಿತ್ ಪಟೀದಾರ್ ಟೀಂ ಸವಾಲು ಹೇಗಿರುತ್ತೆ ಅನ್ನೋ ಕುತೂಹಲವಿದೆ.

ಆರ್ ಸಿಬಿ 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ, 4ರಲ್ಲಿ ಸೋತು ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೆಕೆಆರ್ ಮೊದಲ 6 ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿತು. ಆದರೆ, ಮುಂದಿನ 4 ಪಂದ್ಯಗಳಲ್ಲಿ ಗೆಲುವು ಕಾಣುತ್ತಾ ಬಂದಿದೆ. ಉಳಿದಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಒಂದು ಪಂದ್ಯ ಸೋತರೂ ಉಳಿದ ತಂಡಗಳ ಸೋಲು, ಗೆಲುವಿನ ಲೆಕ್ಕಾಚಾರದ ಮೇಲೆ ಪ್ಲೇ ಆಫ್ ನಿರ್ಧಾರವಾಗುತ್ತೆ.

ಆರ್ ಸಿಬಿ ಹಾಗೂ ಕೆಕೆಆರ್ ಇದುವರೆಗೂ 35 ಬಾರಿ ಮುಖಾಮುಖಿ ಆಗಿದ್ದು, 20ರಲ್ಲಿ ಕೆಕೆಆರ್ ಗೆದ್ದರೆ 15ರಲ್ಲಿ ಆರ್ ಸಿಬಿ ಗೆದ್ದಿದೆ. ಒಂದು ರೀತಿ ಹೆಡ್ ಟು ಹೆಡ್ ಆಟವಿರುತ್ತೆ. ಮುಂಬೈ ವಿರುದ್ಧದ ಕಳೆದ ಪಂದ್ಯದಲ್ಲಿ ಆರ್ ಸಿಬಿ ತಂಡ ಕೊನೆಯ ಓವರ್ ತನಕ ಹೋಗಿ ರಣರೋಚಕದಿಂದ ಕೂಡಿತ್ತು. ಈ ಪಂದ್ಯವೂ ಅದೆ ರೀತಿ ಆಗುತ್ತಾ ನೋಡಬೇಕಿದೆ. ಮೇ 13ರ ಸಂಜೆ 7.30ಕ್ಕೆ ರಾಯಪುರದಲ್ಲಿ ಪಂದ್ಯ ನಡೆಯಲಿದೆ.

WhatsApp Group Join Now
Telegram Group Join Now
Share This Article