ಪ್ರಜಾಸ್ತ್ರ ಸುದ್ದಿ
ವಿಜಯವಾಡ(Vijayawad): ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಯೋಧರ ಕುಟುಂಬಗಳಿಗೆ ಇನ್ಮುಂದೆ ತೆರಿಗೆ ವಿನಾಯ್ತಿ ಇರಲಿದೆ ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನೌಕಾಪಡೆ, ವಾಯುಪಡೆ, ಸಿಆರ್ ಪಿಎಫ್, ಅರೆಸೇನೆ ಸೇರಿದಂತೆ ಸೇನಾ ಸಿಬ್ಬಂದಿ ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸುತ್ತಿರಲಿ. ಅವರ ಕುಟುಂಬಕ್ಕೆ ತೆರಿಗೆ ವಿನಾಯ್ತಿ ಇರಲಿದೆ. ಇದು ಅವರಿಗೆ ಆಂಧ್ರಪದೇಶ ನೀಡುವ ಗೌರವ ಹಾಗೂ ಕೃತಜ್ಞತೆ ಎಂದಿದ್ದಾರೆ.
ಇದಕ್ಕೂ ಮೊದಲು ನಿವೃತ್ತಿ ಹೊಂದಿದ ಸೇನಾ ಅಧಿಕಾರಿಗಳು, ಗಡಿಯಲ್ಲಿರುವ ಯೋಧರ ಕುಟುಂಬಕ್ಕೆ ಮಾತ್ರ ಆಸ್ತಿ ತೆರಿಗೆ ವಿನಾಯ್ತಿ ಇತ್ತು. ಇನ್ನು ದೇಶದ ಯಾವುದೇ ಭಾಗದಲ್ಲಿರುವ ಆಂಧ್ರದ ಗ್ರಾಮೀಣ ಭಾಗದ ಸೈನಿಕರಿಗೆ ಅಥವ ಅವರ ಪತ್ನಿ, ಜಂಟಿಯಾಗಿ ಇರುವ ಆಸ್ತಿಗೆ ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ಸೈನಿಕ್ ಕಲ್ಯಾಣ ನಿರ್ದೇಶಕರ ಶಿಫಾರಸಿನ ಬಳಿಕ ಈ ತೀರ್ಮಾನ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ.