ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತದ ಪ್ರಧಾನಿ 17 ವರ್ಷಗಳ ಬಳಿಕ ನೈಜೇರಿಯಾಗೆ ಭೇಟಿ ನೀಡಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಭಾನುವಾರ ನೈಜೇರಿಯಾದ ಅಬುಜಾ(Abuja) ತಲುಪಿದ್ದಾರೆ. ಅವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಸ್ವಾಗತ ಮಾಡಿಕೊಂಡಿದ್ದಾರೆ. ಬ್ರೆಜಿಲ್, ಗಯಾನಾ ಹಾಗೂ ನೈಜೇರಿಯಾ(Nigeria) ಪ್ರವಾಸವನ್ನು ಪ್ರಧಾನಿ ಮೋದಿ ಕೈಗೊಂಡಿದ್ದಾರೆ. 2007ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೈಜೇರಿಯಾ ಭೇಟಿ ನೀಡಿದ್ದರು.
ಜಿ-20 ಶೃಂಗಸಭೆಗಾಗಿ ಪ್ರಧಾನಿ ಮೋದಿಯವರು ಬ್ರೆಜಿಲ್ ಭೇಟಿ ನೀಡಲಿದ್ದಾರೆ. ನಂತರ ಗಯಾನಾಕ್ಕೂ ಭೇಟಿ ಕೊಡಲಿದ್ದು, ಅಲ್ಲಿ ನಡೆಯುವ CARICOM-India ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಸಹ ವಿಶೇಷವಾಗಿದ್ದು, 50 ವರ್ಷಗಳ ನಂತರ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ. ನೈಜೇರಿಯಾ ಭೇಟಿಯ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.