Ad imageAd image

ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ವಿಚಾರ, ಬಿಸಿಸಿಐ ಹೇಳಿದ್ದೇನು?

Nagesh Talawar
ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ವಿಚಾರ, ಬಿಸಿಸಿಐ ಹೇಳಿದ್ದೇನು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರು. ರನ್ ಮಿಷನ್, ಕಿಂಗ್ ಕೊಹ್ಲಿ ಎಂದೇ ಖ್ಯಾತಿ ಗಳಿಸಿರುವ ಅವರು, ದಾಖಲೆಗಳ ಸರದಾರ ಸಹ ಹೌದು. ಇಂತಹ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಇದರಿಂದ ಅಭಿಮಾನಿಗಳು ಸೇರಿದಂತೆ ಸ್ವತಃ ಬಿಸಿಸಿಐಗೂ ಶಾಕ್ ಆಗಿದೆ. ಐಪಿಎಲ್ ಟೂರ್ನಿ ಮಧ್ಯದಲ್ಲಿಯೇ ನಾಯಕ ರೋಹಿತ್ ಶರ್ಮಾ ಟೆಸ್ಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಟಿ-20 ಆಟಕ್ಕೆ ಈಗಾಗ್ಲೇ ಗುಡ್ ಬೈ ಹೇಳಿದ್ದಾರೆ. ಏಕದಿನ ತಂಡದಲ್ಲಿ ಮಾತ್ರ ಆಡಲಿದ್ದಾರೆ. ಹೀಗಿರುವಾಗ ಈಗ ಕೊಹ್ಲಿ ಸಹ ಟೆಸ್ಟ್ ಆಟಕ್ಕೆ ಬೈ ಹೇಳಿದರೆ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.

ವಿರಾಟ್ ಕೊಹ್ಲಿ ಈಗಲೂ ಸಾಕಷ್ಟು ಫಿಟ್ ಆಗಿದ್ದಾರೆ. ಅವರಲ್ಲಿ ಆಡುವ ಸಾಮರ್ಥ್ಯವಿದೆ. ಅವರು ಡ್ರೆಸ್ಸಿಂಗ್ ರೂಮಿನಲ್ಲಿದ್ದರೆ ಉತ್ಸಾಹ ಹೆಚ್ಚಿರುತ್ತೆ. ನಿವೃತ್ತಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ನಾವು ಸಲಹೆ ನೀಡಿದ್ದೇವೆ ಅಂತಾ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏನೇ ಆಗಲಿ ಕೊಹ್ಲಿ ಅಂಗಳದಲ್ಲಿ ಇರುವಷ್ಟು ಹೊತ್ತು ಅಭಿಮಾನಿಗಳಿಗೆ ಖುಷಿ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಹತ್ತಾರು ದಾಖಲೆಗಳನ್ನು ಮಾಡಿ ರನ್ ಮಿಷನ್ ಎನಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article