Ad imageAd image

ಕೋಲ್ಕತ್ತಾ: 15 ಮತಗಟ್ಟೆಗಳಲ್ಲಿ ಮರು ಮತದಾನ

Nagesh Talawar
ಕೋಲ್ಕತ್ತಾ: 15 ಮತಗಟ್ಟೆಗಳಲ್ಲಿ ಮರು ಮತದಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೋಲ್ಕತ್ತಾ(Kolkata): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕಣ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದೆ. ಡೈಮಂಡ್ ಹಾರ್ಬರ್ ಹಾಗೂ ಮಗರಹಾಟ್ ಪಶ್ಚಿಮ ಕ್ಷೇತ್ರದ 15 ಮತಗಟ್ಟೆಗಳಲ್ಲಿ ಶನಿವಾರ ಮರು ಮತದಾನ ನಡೆಯುತ್ತಿದೆ. ಡೈಮಂಡ್ ಹಾರ್ಬರ್ ಭಾಗದಲ್ಲಿ 4, ಮಗರಹಾಟ್ ಪಶ್ಚಿಮ ಭಾಗದಲ್ಲಿ 11 ಮತಗಟ್ಟೆಗಳಲ್ಲಿ ಮುಂಜಾನೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ.

ಇದಕ್ಕೂ ಪೂರ್ವ ನಡೆದ ಮತದಾನದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆಯಾ ಕ್ಷೇತ್ರದ ಅಧಿಕಾರಿಗಳು ವರದಿ ನೀಡಿದ್ದರು. ಹೀಗಾಗಿ 1951 ಜನತಾ ಕಾಯ್ದೆ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 58ರ ಅಡಿಯಲ್ಲಿ ಚುನಾವಣಾ ಆಯೋಗ ಮರು ಮತದಾನ ನಡೆಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23 ಹಾಗೂ 29ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಮೇ 4ರಂದು ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.

WhatsApp Group Join Now
Telegram Group Join Now
Share This Article