Ad imageAd image

3 ಸಾವಿರ ದಾಟಿದ ವಾಣಿಜ್ಯ ಸಿಲಿಂಡರ್ ಬೆಲೆ

Nagesh Talawar
3 ಸಾವಿರ ದಾಟಿದ ವಾಣಿಜ್ಯ ಸಿಲಿಂಡರ್ ಬೆಲೆ
Chennai, Tamil Nadu, India - February 20 2021: LPG Gas cylinders for home distribution in a truck. LPG gas used for domestic cooking
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪಶ್ಚಿಮ ಏಷ್ಯದ ಯುದ್ಧ ಪರಿಣಾಮ ಎಲ್ಲೆಡೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಭಾರತದಲ್ಲಿ ತೈಲದ ಕೊರತೆಯಿಂದಾಗಿ ಸಾಕಷ್ಟು ವಸ್ತುಗಳು ದುಬಾರಿ ಆಗಿವೆ. ಅದರಲ್ಲೂ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 993ಕ್ಕೆ ಏರಿಕೆಯಾಗಿದೆ. ಈ ಮೂಲಕ ಬರೋಬ್ಬರಿ 3 ಸಾವಿರ ರೂಪಾಯಿಯ ಗಡಿ ದಾಟಿದೆ.

ನವದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3,071 ರೂಪಾಯಿ ಆಗಿದೆ. ಕೆಲ ದಿನಗಳ ಹಿಂದೆ 2078 ರೂಪಾಯಿ ಇತ್ತು. ಈ ಮೂಲಕ ವಾಣಿಜ್ಯ ಸಿಲಿಂಡರ್ ಇದುವರೆಗೂ ಮೂರು ಬಾರಿ ಏರಿಕೆಯಾಗಿದೆ. ಇದರ ಪರಿಣಾಮ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಊಟ, ಉಪಹಾರದ ಬೆಲೆಯೂ ಏರಿಕೆಯಾಗಿ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

WhatsApp Group Join Now
Telegram Group Join Now
Share This Article