Ad imageAd image

7 ವರ್ಷದ ಬಾಲಕ ಶ್ರೀಲಂಕಾ-ಭಾರತ ನಡುವಿನ ಸಮುದ್ರ ಮಾರ್ಗ ಈಜಿ ದಾಖಲೆ

Nagesh Talawar
7 ವರ್ಷದ ಬಾಲಕ ಶ್ರೀಲಂಕಾ-ಭಾರತ ನಡುವಿನ ಸಮುದ್ರ ಮಾರ್ಗ ಈಜಿ ದಾಖಲೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕೇವಲ 7 ವರ್ಷದ ಬಾಲಕ ಶ್ರೀಲಂಕಾ ಹಾಗೂ ಭಾರತ ನಡುವಿನ ಸಮದ್ರು ಮಾರ್ಗವನ್ನು ಈಜಿ ದಡ ಸೇರುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಇದರೊಂದಿಗೆ ಅತಿ ಸಣ್ಣ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೊದಲ ಬಾಲಕ ಅನ್ನೋ ದಾಖಲೆಯನ್ನು ಇಶಾಂಕ್ ಸಿಂಗ್ ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ.

ರಾಂಚಿಯ ಧುರ್ವಾದ 7 ವರ್ಷದ ಬಾಲಕ ಇಶಾಂಕ್, ಶ್ರೀಲಂಕಾದ ತಲೈಮನ್ನಾರ್ ನಿಂದ ಭಾರತದ ಧನುಷ್ಕೋಡಿಯವರೆಗಿನ 29 ಕಿಲೋ ಮೀಟರ್ ದೂರದ ಅತ್ಯಂತ ಅಪಾಯಕಾರಿ ಪಾಕ್ ಜಲಸಂಧಿಯನ್ನು ದಾಟಿದ್ದಾನೆ. 9 ಗಂಟೆ 50 ನಿಮಿಷಗಳಲ್ಲಿ ಈಜಿ ಈ ಮಾರ್ಗವನ್ನು ದಾಟುವ ಮೂಲಕ ವಿಶ್ವದ ಅತ್ಯಂತ ಕಿರಿಯ ಈಜುಗಾರ ಅನ್ನೋ ಕೀರ್ತಿಗೂ ಪಾತ್ರನಾಗಿದ್ದಾನೆ.

ತರಬೇತುದಾರರಾದ ಬಜರಂಗ್ ಕುಮಾರ್, ಅಮನ್ ಕುಮಾರ್ ಜೈಸ್ವಾಲ್ ಅವರ ಮಾರ್ಗದರ್ಶನಲ್ಲಿ ಈಜು ಅಭ್ಯಾಸ ಮಾಡಿದ್ದಾನೆ. ಧುರ್ವಾ ಆಣೆಕಟ್ಟೆಯಲ್ಲಿ ನಿತ್ಯ 4 ರಿಂದ 5 ಗಂಟೆಗಳ ಅಭ್ಯಾಸ ಮಾಡಿದ್ದಾನೆ. ರಾಂಚಿಯ ಡಿಎವಿ ಶ್ಯಾಮಲಿಯಲ್ಲಿ 3ನೇ ತರಗತಿ ಓದುತ್ತಿದ್ದಾನೆ. ಏಪ್ರಿಲ್ 30ರಂದು ಈ ಸಾಧನೆ ಮಾಡಿದ್ದು, ಯೂನಿವರ್ಸಲ್ ರೆಕಾರ್ಡ್ ಫೋರಮ್ ನಿಂದ ಅತಿ ಕಿರಿಯ ಹಾಗೂ ವೇಗದ ಪಾಕ್ ಸ್ಟ್ರೈಟ್ ಈಜುಗಾರ ಅನ್ನೋ ವಿಶ್ವದಾಖಲೆಯ ಪ್ರಮಾಣ ಪತ್ರ ಪಡೆದಿದ್ದಾನೆ.

WhatsApp Group Join Now
Telegram Group Join Now
Share This Article