ಪ್ರಜಾಸ್ತ್ರ ಸುದ್ದಿ
ಜಬಲ್ಪುರ್(Jabalpur): ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಡ್ಯಾಂನಲ್ಲಿ ಶುಕ್ರವಾರ ಸಂಜೆ 40 ಪ್ರಯಾಣಿಕರಿದ್ದ ಬೋಡ್ ಮಗುಚಿ 9 ಜನರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿ ನಾಲ್ವರು ನಾಪತ್ತೆಯಾಗಿದ್ದು, ಶನಿವಾರ ಮುಂಜಾನೆಯಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಮಳೆಯಾಗುತ್ತಿದ್ದ ಕಾರಣದಿಂದ ಶುಕ್ರವಾರ ಸಂಜೆ ಶೋಧ ಕಾರ್ಯ ನಿಲ್ಲಿಸಲಾಗಿತ್ತು. ಶನಿವಾರ ಮುಂಜಾನೆ 5 ಗಂಟೆಯಿಂದ ನಾಪತ್ತೆಯಾದವರ ಪತ್ತೆ ಕಾರ್ಯ ನಡೆದಿದೆ. ಈ ದುರಂತಕ್ಕೆ ಜೀವ ಸುರಕ್ಷತೆಯ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ಎಂದು ತಿಳಿದು ಬಂದಿದೆ. ಬೋಟ್ ನೊಳಗೆ ನೀರು ನುಗ್ಗಿದ ಸಂದರ್ಭದಲ್ಲಿ ಲೈಪ್ ಜಾಕೇಟ್ ಗಳನ್ನು ಬಿಚ್ಚಿ ಕೊಡುತ್ತಿರುವ ವಿಡಿಯೋ ಕಂಡು ಬಂದಿದೆ.
ವರದಿಗಳ ಪ್ರಕಾರ 29 ಪ್ರಯಾಣಿಕರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಬೋಟ್ ನಲ್ಲಿ 40ಕ್ಕೂ ಹೆಚ್ಚು ಜನರಿದ್ದರು. 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಿದ್ದರೂ ಹಡಗು ನೀರಿಗಿಳಿಯಲು ಹೇಗೆ ಅನುಮತಿ ನೀಡಲಾಯಿತು ಅನ್ನೋ ಪ್ರಶ್ನೆ ಮೂಡಿದೆ. ತಾಯಿಯೊಬ್ಬರು ತನ್ನ 4 ವರ್ಷದ ಪುಟ್ಟ ಮಗುವನ್ನು ಬಿಗಿದಪ್ಪಿಕೊಂಡೆ ಮೃತಪಟ್ಟಿದ್ದು, ಎರಡು ಜೀವಗಳ ಕರುಣಾಜನಕ ದೃಶ್ಯ ಎಲ್ಲರ ಹೃದಯ ಹಿಂಡುತ್ತಿದೆ.




