ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ(POCSO) ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಇಂದು ಈ ಪ್ರಕರಣದ ಅರ್ಜಿ ಹೈಕೋರ್ಟ್ ಮುಂದೆ ಬಂದಿತು. ಕೋರ್ಟ್ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಬಿಎಸ್ವೈ ಸ್ವಲ್ಪ ನಿರಾಳರಾಗಿದ್ದಾರೆ. ಇದೆ ವೇಳೆ ಜಾಮೀನು ಅರ್ಜಿಯ ವಿಚಾರಣೆ ಸಹ ನಡೆಯಿತು.
ಯಡಿಯೂರಪ್ಪನವರ(BSY) ಮನೆಗೆ ಮಹಿಳೆಯೊಬ್ಬಳು ಅಪ್ರಾಪ್ತ ಮಗಳೊಂದಿಗೆ ಸಹಾಯ ಕೇಳಲು ಬಂದಿದ್ದರು. ಈ ವೇಲೆ ಯಡಿಯೂರಪ್ಪ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 14, 2024ರಂದು ದೂರು ಸಲ್ಲಿಸಿದ್ದಾರೆ. ಇನ್ನು ದೂರು ಸಲ್ಲಿಸಿದ ಮಹಿಳೆ ಅನಾರೋಗ್ಯದ ಹಿನ್ನಲೆಯಲ್ಲಿ ಈಗಾಗ್ಲೇ ಮೃತಪಟ್ಟಿದ್ದಾರೆ.