Ad imageAd image

ಬೆಂಗಳೂರು: ಬೆಂಕಿ ಅನಾಹುತ.. ಓರ್ವ ಸಾವು, ನಾಲ್ವರಿಗೆ ಗಾಯ

Nagesh Talawar
ಬೆಂಗಳೂರು: ಬೆಂಕಿ ಅನಾಹುತ.. ಓರ್ವ ಸಾವು, ನಾಲ್ವರಿಗೆ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಿಲಿಕಾನ್ ಸಿಟಿಯ ನಗರಬಾವಿಯ ಹತ್ತಿರದಲ್ಲಿರುವ ಶ್ರೀದುರ್ಗಾ ಗ್ರ್ಯಾಂಡ್ ಹೋಟೆಲ್ ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಅನಾಹುತವಾಗಿದೆ. ಈ ವೇಳೆ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಹೊಗೆ ದಟ್ಟ ಪ್ರಮಾಣದಲ್ಲಿ ಆವರಿಸಿಕೊಂಡಿದ್ದರಿಂದ ರಾಜಕುಮಾರ(45) ಅನ್ನೋ ಸಿಬ್ಬಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಾನಂದ, ಭೀಮ, ಸತೀಶ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಬೆಂಕಿ ಅನಾಹುತ ಹೇಗೆ ಸಂಭವಿಸಿತು ಅನ್ನೋದು ತನಿಖೆಯಿಂದ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article