ಪ್ರಜಾಸ್ತ್ರ ಸುದ್ದಿ
ಶೃಂಗೇರಿ(Sringeri): ಸಾಕಷ್ಟು ಗೊಂದಲ, ಆರೋಪ ಪ್ರತ್ಯಾರೋಪಗಳಿಂದಲೇ ಸದಾ ಚರ್ಚೆಯಲ್ಲಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದ ವಿಚಾರ ಕೋರ್ಟ್ ಅಂಗಳಕ್ಕೆ ಹೋಗಿ ಬಂದಿದೆ. ಕೋರ್ಟ್ ಆದೇಶದಂತೆ ಮರು ಎಣಿಕೆ ನಡೆದಿದೆ. ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡಗೆ 255 ಮತಗಳ ಹಿನ್ನಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಟಿ.ಎನ್ ಜೀವರಾಜಗೆ ಮುನ್ನಡೆಯಾಗಿದೆ.
ಶನಿವಾರ ದಿನಪೂರ್ತಿ ನಡೆದ ಮತ ಎಣಿಕೆ ಕಾರ್ಯ ಭಾನುವಾರ ಬೆಳಗಿನ ಜಾವ 3 ಗಂಟೆಯ ತನಕ ನಡೆದಿದೆ. 2023ರ ಎಣಿಕೆ ವೇಳೆ ಟಿ.ಡಿ ರಾಜೇಗೌಡ ಅವರಿಗೆ ಮಾನ್ಯವಾಗಿದ್ದ 255 ಮತಗಳು ಅಮಾನ್ಯಗೊಂಡಿವೆ. ಡಿ.ಎನ್ ಜೀವರಾಜ ಅವರ 2 ಮತಗಳು ಅಮಾನ್ಯಗೊಂಡಿವೆ. ಹೀಗಾಗಿ 52 ಮತಗಳ ಅಂತರದಿಂದ ಜೀವರಾಜ ಗೆಲುವು ಸಾಧಿಸಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದೀಗ ರಾಜೇಗೌಡ ಪರ ಏಜೆಂಟ್ ಆಗಿದ್ದ ಸುಧೀರಕುಮಾರ ಮುರೊಳ್ಳಿ ಠಾಣೆ ಮೆಟ್ಟಿಲು ಹತ್ತಿದ್ದು, ಹಿಂದಿನ ಚುನಾವಣಾಧಿಕಾರಿ, ಹಿಂದಿನ ಜಿಲ್ಲಾಧಿಕಾರಿ ಹಾಗೂ ಡಿ.ಎನ್ ಜೀವರಾಜ ವಿರುದ್ಧ ದೂರು ದಾಖಲಿಸಿದ್ದಾರೆ.




