Ad imageAd image

ಹಿಂದೂ ಮಹಾಸಾಗರದಲ್ಲಿ ಕಂಗೊಳಿಸಿದ ತಿರಂಗ

Nagesh Talawar
ಹಿಂದೂ ಮಹಾಸಾಗರದಲ್ಲಿ ಕಂಗೊಳಿಸಿದ ತಿರಂಗ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಹಿಂದೂ ಮಹಾಸಾಗರದ ಭಾಗವಾಗಿರುವ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಹತ್ತಿರ ಭಾರತದ ಬಾವುಟ ಕಂಗೊಳಿಸಿದೆ. ನೀರಿನಾಳದಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ ಹಾರಿಸಿ ಭಾರತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿತು. 60×40 ಮೀಟರ್ ಅಳತೆಯ ಬಾವುಟವನ್ನು ಸ್ವರಾಜ್ ದ್ವೀಪದ ರಾಧಾನಗರಿ ಬೀಸ್ ಹತ್ತಿರ ಮುಂಜಾನೆ 10.35ಕ್ಕೆ 253 ನುರಿತ ಸ್ಕೂಬಾ ಡೈವರ್ ಗಳ ಮೂಲಕ ಇದನ್ನು ಸಾಧಿಸಲಾಯಿತು.

ಈ ವೇಳೆ ಅಂಡಮಾನ್ ನಿಕೋಬಾರ್ ಗವರ್ನರ್ ಡಿ.ಕೆ ಜೋಶಿ, ಮುಖ್ಯಕಾರ್ಯದರ್ಶಿ ಚಂದ್ರಭೂಷಣ ಕುಮಾರ್, ಪೊಲೀಸ್ ಮಹಾನಿರ್ದೇಶಕ ಎಚ್.ಎಸ್ ಧಲಿವಾಲ್ ಸೇರಿದಂತೆ ಇತರರು ಸಾಕ್ಷಿಯಾದರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕಮಿಟಿಯ ತೀರ್ಪುಗಾರ ರಿಷಿನಾಥ್ ದಾಖಲೆಯ ಪ್ರಮಾಣ ಪತ್ರವನ್ನು ಗವರ್ನರ್ ಅವರಿಗೆ ನೀಡಿದರು.

ಕೇಂದ್ರ ಸರ್ಕಾರ ‘ಗ್ರೇಟರ್ ನಿಕೋಬರ್ ಅಭಿವೃದ್ಧಿ’ ಯೋಜನೆಯ ಅಡಿಯಲ್ಲಿ ನಿಕೋಬರ್ ದ್ವೀಪದ ತುತ್ತುದಿಯನ್ನು ಕೇಂದ್ರವಾಗಿಸಿ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದಕ್ಕೆ 81 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಲಾಗುತ್ತಿದೆ. ಈ ಮೂಲಕ ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತ ಸಜ್ಜಾಗುತ್ತಿದೆ.

WhatsApp Group Join Now
Telegram Group Join Now
Share This Article