Ad imageAd image

ಪತಿಯ ಸಾವಿನ ಆಘಾತ, ಪತ್ನಿ ಆತ್ಮಹತ್ಯೆ

Nagesh Talawar
ಪತಿಯ ಸಾವಿನ ಆಘಾತ, ಪತ್ನಿ ಆತ್ಮಹತ್ಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandya): ಕೆ.ಆರ್ ಪೇಟೆ ತಾಲೂಕಿನ ಅತ್ತಿಮಾರನಹಳ್ಳಿ ಗ್ರಾಮದ ರಾಜು ಎಂಬುವಾರ ಅನಾರೋಗ್ಯದಿಂದ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಅಂತ್ಯಕ್ರಿಯೆ ನಡೆಸಲಾಗಿದೆ. ಇದರ ನಡುವೆ ಪತ್ನಿ ಗೀತಾ(42) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ.

ಕಳೆದ ಆರು ತಿಂಗಳ ಹಿಂದೆಯಷ್ಟೇ ಕಿರಿಯ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದಲೇ ಇವರು ಸಾಕಷ್ಟು ನೊಂದಿದ್ದರು. ಹೀಗಿರುವಾಗ ಪತಿ ಸಾವಿನ ಆಘಾತದಲ್ಲಿ ಪತ್ನಿ ಸಾವಿನ ಹಾದಿ ಹಿಡಿದಿದ್ದಾರೆ. ಇದರಿಂದ ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಹೆತ್ತವರನ್ನು ಕಳೆದುಕೊಂಡ ಹಿರಿಯ ಮಗ ಅನಾಥನಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Group Join Now
Telegram Group Join Now
Share This Article