Ad imageAd image

ಟಿವಿಕೆಗೆ ಸಿಕ್ತು ವಿಸಿಕೆ ಬೆಂಬಲ..

Nagesh Talawar
ಟಿವಿಕೆಗೆ ಸಿಕ್ತು ವಿಸಿಕೆ ಬೆಂಬಲ..
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಐದು ದಿನವಾಗಿದೆ. ಆದರೂ ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ. ಯಾಕಂದರೆ ಮತದಾರ ಪ್ರಭು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. 107 ಸ್ಥಾನಗಳನ್ನು ಪಡೆದು ಮೊದಲ ಅತಿದೊಡ್ಡ ಪಕ್ಷವಾಗಿರುವ ನಟ ವಿಜಯ ಸ್ಥಾಪನೆಯ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಎಡಪಕ್ಷಗಳ ಬೆಂಬಲ ಪಡೆಯೋದೆ ದೊಡ್ಡ ಸವಾಲಾಗಿ ಹೋಯಿತು. ಇದೀಗ ವಿಸಿಕೆ ಬೆಂಬಲ ನೀಡಿದೆ ಎಂದು ಹೇಳಲಾಗುತ್ತಿದೆ.

ಐದು ಸ್ಥಾನ ಗೆದ್ದಿರುವ ಕಾಂಗ್ರೆಸ್ ಈ ಮೊದಲೆ ಬೆಂಬಲ ಘೋಷಣೆ ಮಾಡಿದೆ. ಸಿಪಿಐ, ಸಿಪಿಎಂ ಪಕ್ಷಗಳು ತಲಾ 2ರಲ್ಲಿ ಗೆದ್ದಿದ್ದು, ಈ ಪಕ್ಷಗಳು ಸಹ ಬೆಂಬಲ ನೀಡಿವೆ. ಆದರೆ, ಉಳಿದ ಸಣ್ಣಪಟ್ಟ ಪಕ್ಷಗಳ ಬೆಂಬಲ ಸಿಗದೆ ವಿಜಯ ಕಳೆದ ನಾಲ್ಕು ದಿನಗಳಿಂದ ಲೋಕಭವನದ ಪರೇಡ್ ನಡೆಸಿದರು. ಈಗ ವಿಸಿಕೆ ಸಹ ಬೆಂಬಲ ನೀಡಿದೆಯಂತೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ತಿರುಮಾವಳವನ್ ಅವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ.

ಈಗಾಗ್ಲೇ ವಿಜಯ ಅಭಿಮಾನಿಗಳು, ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಆಗಬೇಕು ಎಂದು ಕಾಯುತ್ತಿರುವವರಿಗೂ ಸಿಹಿ ಸುದ್ದಿ ಸಿಕ್ಕಿದೆ. ಮೇ 10ಕ್ಕೆ ಅಂದರೆ ಭಾನುವಾರಕ್ಕೆ ಈಗಿನ ಸರ್ಕಾರದ ಅವಧಿ ಮುಗಿಯಲಿದೆ. ಹೀಗಾಗಿ ಹೊಸ ಸರ್ಕಾರ ರಚನೆ ಆಗಲೇಬೇಕು. ಇಲ್ಲದೆ ಹೋದರೆ ರಾಷ್ಟ್ರಪತಿ ಆಡಳಿತ ಬರಲಿದೆ. ಹೀಗಾಗಿ ವಿಜಯ ಇಂದು ರಾತ್ರಿ ಏನಾದರೂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರ ಕಾದು ನೋಡಬೇಕಿದೆ.

WhatsApp Group Join Now
Telegram Group Join Now
Share This Article