ಪ್ರಜಾಸ್ತ್ರ ಸುದ್ದಿ
ಶಿಗ್ಗಾವಿ(Shiggavi): ತಾಲೂಕಿನ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ಕುರಿತು ತಮ್ಮ ಮನೆಗಳ ಮುಂದೆ ಬ್ಯಾನರ್ ಹಾಕಿದ್ದಾರೆ. ಈ ಮೂಲಕ ತಮಗೆ ಮನೆಯ ಹಕ್ಕು ಪತ್ರ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳುವವನೆ ಭೂಮಿ ಒಡೆಯ ದಲಿತನ ಜಮೀನನ್ನು ಬೇರೆಯೊಬ್ಬ ವ್ಯಕ್ತಿಗೆ ಮಾರಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳು ಸುಳ್ಳು ಭರವಸೆ ಎಂದು ಬರೆದಿರುವ ಬ್ಯಾನರ್ ಕಟ್ಟಿದ್ದಾರೆ.
ಶಿಗ್ಗಾವಿಯಲ್ಲಿ ಮಧ್ಯಾಹ್ನ 11ಗಂಟೆಯವರೆಗೆ ಶೇಕಡ 26.01ರಷ್ಟು ಮತದಾನವಾಗಿದೆ. ಎನ್ ಡಿಎ ಅಭ್ಯರ್ಥಿಯಾಗಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ, ಕಾಂಗ್ರೆಸ್ ನಿಂದ ಯಾಸಿರ್ ಪಠಾಣ್ ಕಣದಲ್ಲಿದ್ದಾರೆ.