ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಹೇರೂರು ವಲಯದ ತಾಡತೆಗನೂರು ಕಾರ್ಯಕ್ಷೇತ್ರದ ಜವಾಹರ್ ನವೋದಯ ನಂಬರ್ 1 ವಿದ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಕಲ್ಬುರ್ಗಿ ತಾಲೂಕಿನ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಸಿ ನಾಟಿ ಮಾಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ಪ್ರಕೃತಿ ನಮಗೆ ಕೊಡುವುದನ್ನು ನಾವು ಆನಂದಿಸುತ್ತೇವೆ. ಆದರೆ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಾವು ಮರೆಯಬಾರದು ಎನ್ನುವ ಮಾತುಗಳು ಎಲ್ಲರಿಂದ ಕೇಳಿ ಬಂದವು. ಈ ವೇಳೆ ಶಾಲೆಯ ಪ್ರಾಚಾರ್ಯರಾದ ವಿ.ನಾಗಾರ್ಜುನ್ ಸಹ ಶಿಕ್ಷಕರಾದ ಶ್ರೀಧರ ಜೆ.ವಿ ಹಾಗೂ ಗ್ರಾಮದ ಮುಖಂಡರಾದ ಅಣ್ಣಾರಾವ, ಸಾಬಣ್ಣ, ಕೃಷಿ ಮೇಲ್ವಿಚಾರಕರಾದ ಶಂಕ್ರಯ್ಯ ವಲಯದ ಮೇಲ್ವಿಚಾರಕರಾದ ವಿರುಪಾಕ್ಷಯ್ಯ, ಸೇವಾ ಪ್ರತಿನಿಧಿ ರೇಣುಕಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.