Ad imageAd image

ಬಿಟ್ಟಿ ಭಾಗ್ಯವೆಂದು ಆಡಿಕೊಳ್ಳುವವರೆ ಇಲ್ನೋಡಿ..!

ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿರುವುದು ಎಲ್ಲರೂ ಒಪ್ಪಬೇಕಾದ ವಿಚಾರ.

Nagesh Talawar
ಬಿಟ್ಟಿ ಭಾಗ್ಯವೆಂದು ಆಡಿಕೊಳ್ಳುವವರೆ ಇಲ್ನೋಡಿ..!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruhalakshmi Scheme) ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿರುವುದು ಎಲ್ಲರೂ ಒಪ್ಪಬೇಕಾದ ವಿಚಾರ. ಹೀಗಾಗಿ ಆಗಾಗ ಕೆಲವೊಂದಿಷ್ಟು ವಿಚಾರಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಇದೇ ರೀತಿಯ ಕುಂದಾನಗರಿ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮಂಟೂರು ಗ್ರಾಮ ಪಂಚಾಯ್ತಿ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿ ಎನ್ನುವವರು ತಮಗೆ ಬರುತ್ತಿರುವ ಗೃಹ ಲಕ್ಷ್ಮಿ ಹಣದ ಜೊತೆಗೆ ಸ್ವಂತ ಹಣ ಹಾಕಿ ಸಣ್ಣದೊಂದು ಗ್ರಂಥಾಲಯ ನಿರ್ಮಿಸಿದ್ದಾರೆ.

ಕಳೆದ 13 ತಿಂಗಳಿನಿಂದ ಬಂದ 26 ಸಾವಿರ ರೂಪಾಯಿ ಜೊತೆಗೆ ಪಂಚಾಯ್ತಿ ಸದಸ್ಯೆಯಾಗಿರುವುದಕ್ಕೆ ಬರುವ ಗೌರವ ಧನ ಸೇರಿದಂತೆ ಒಂದೂವರೆ ಲಕ್ಷ ರೂಪಾಯಿಯಲ್ಲಿ ಸಣ್ಣದೊಂದು ಗ್ರಂಥಾಲಯ(Library) ನಿರ್ಮಿಸಿದ್ದೇನೆ. ಇದರ ಉಪಯೋಗವನ್ನು ಗ್ರಾಮದ ವಿದ್ಯಾರ್ಥಿಗಳು ಪಡೆಯಬಹುದು ಎಂದು ಹೇಳಿದ್ದಾರೆ. ಇವರು ಎಕ್ಸ್ ಖಾತೆ ಸಹ ಹೊಂದಿದ್ದು ಅದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಡೆವಲಪ್ ಮೆಂಟ್ ಕಮಿಷನರ್ ಉಮಾ ಮಹಾದೇವನ್ ದಾಸಗುಪ್ತ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಟ್ಯಾಗ್ ಮಾಡಿದ್ದಾರೆ. ಮಲ್ಲವ್ವ ಮೇಟಿಯವರ ಆಲೋಚನೆ ನಿಜಕ್ಕೂ ಮಾದರಿಯಾಗಿದೆ.

WhatsApp Group Join Now
Telegram Group Join Now
Share This Article